ಮೇಜರ್ ಅಸಾರಾಮ್ ತ್ಯಾಗಿ ಅವರು ೧೯೬೫ ರ ಭಾರತ-ಪಾಕಿಸ್ತಾನ ಯುದ್ಧವಾದ ಡೋಗ್ರೈ ಕದನದ ನಾಯಕರಾಗಿದ್ದರು. ೧೯೬೫ ಸೆಪ್ಟೆಂಬರ್ ೨೧ ರ ರಾತ್ರಿ, ಮೇಜರ್ ಆಸಾರಾಮ್ ತ್ಯಾಗಿ ಅವರು ಭಾರತೀಯ ಸೇನೆಯ ೩ನೇ ಜಾಟ್ ಬೆಟಾಲಿಯನ್ನಿನ ಪ್ರಮುಖ ತುಕಡಿಯನ್ನು ಮುನ್ನಡೆಸಿ ಪಾಕಿಸ್ತಾನದ ಡೋಗ್ರೈ ಗ್ರಾಮದಲ್ಲಿ, ಪಾಕಿಸ್ತಾನದ ಸ್ಥಾನವನ್ನು ವಶಪಡಿಸಿಕೊಂಡರು. ಮೇಜರ್ ತ್ಯಾಗಿ ಅವರು ದಾಳಿ ಮಾಡುವಾಗ, ಅವರ ಬಲ ಭುಜಕ್ಕೆ ಎರಡು ಗುಂಡುಗಳು ತಗುಲಿದ್ದವು. ತಮ್ಮ ಗಾಯದ ಹೊರತಾಗಿಯೂ, ಅವರು ಟ್ಯಾಂಕುಗಳ ವಿರುದ್ಧ ನೆಡೆದು, ಗ್ರೆನೇಡ್‌ಗಳಿಂದ ಆ ಬದಿಯ ಸಿಬ್ಬಂದಿಯನ್ನು ಕೊಂದರು ಮತ್ತು ಎರಡು ಟ್ಯಾಂಕುಗಳನ್ನು ವಶಪಡಿಸಿಕೊಂಡರು. ಈ ಪ್ರಕ್ರಿಯೆಯಲ್ಲಿ ಅವರಿಗೆ ಮತ್ತೆ ಮೂರು ಗುಂಡುಗಳು ತಗುಲಿದ್ದವು. ಅದರೂ ಸಹ ಪ್ರಜ್ಞೆ ತಪ್ಪುವವರೆಗೂ ಅವರು ತಮ್ಮ ಪ್ರಯತ್ನವನ್ನು ಮುಂದುವೆರೆಸಿದ್ದರು. ನಂತರ ಅವರನ್ನು ಮಿಲಿಟರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ನಿಧನರಾದರು. ಅವರು ಶೌರ್ಯವು ಇತರ ಸೈನಿಕರಿಗೆ ಸ್ಪೂರ್ಥಿಯಾಯಿತು. == ಸ್ಮರಣಾರ್ಥ ಗೀತೆಗಳು == ಡೋಗ್ರೈ ಕದನದ ನೆನಪಿಗಾಗಿ ಅನೇಕ ಹಾಡುಗಳು ಹರಿಯಾಣದಲ್ಲಿ ಜನಪ್ರಿಯವಾಗಿವೆ. ಅವುಗಳಲ್ಲಿ ಒಂದು ಈ ಪದಗಳಲ್ಲಿ ಯುದ್ಧವನ್ನು ವಿವರಿಸುತ್ತದೆ: == ಮಿಲಿಟರಿ ಮಾನ್ಯತೆ == ರಾಷ್ಟ್ರಕ್ಕಾಗಿ ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿದ್ದಕ್ಕಾಗಿ ಮೇಜರ್ ಅಸಾರಾಮ್ ತ್ಯಾಗಿ ಅವರಿಗೆ ಮರಣೋತ್ತರವಾಗಿ ಮಹಾವೀರ ಚಕ್ರವನ್ನು ನೀಡಿ ಗೌರವಿಸಲಾಯಿತು. == ಉಲ್ಲೇಖಗಳು ==